ನಗರದಲ್ಲಿ ಮುಂದುವರೆದ ವಾರೆ..ವ್ಹಾ!
Posted date: 2/June/2010

ಕುರಿಗಳು ಸಾರ್ ಕುರಿಗಳು.., ಕೋತಿಗಳು ಸಾರ್ ಕೋತಿಗಳು..,  ಕತ್ತೆಗಳು ಸಾರ್ ಕತ್ತೆಗಳು.. ಹಾಸ್ಯ ಚಿತ್ರಗಳನ್ನು ನಿರ್ಮಿಸಿ ಪ್ರೇಕ್ಷಕರಿಗೆ ಹಾಸ್ಯದ ರಸದೂಟವನ್ನೇ ಉಣಬಡಿಸಿದ, ನಟ ನಿರ್ಮಾಪಕ ಜೈಜಗದೀಶ್ ಈಗ ಮತ್ತೊಂದು ಹಾಸ್ಯ ಚಿತ್ರವನ್ನು ನಿರ್ಮಿಸಹೊರಟಿದ್ದಾರೆ.

    ಜೆ.ಜೆ. ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಜೈಜಗದೀಶ್ ನಿರ್ಮಿಸುತ್ತಿರುವ ಶುದ್ಧ ಸಾಂಸಾರಿಕ ಹಾಸ್ಯಭರಿತ ಚಿತ್ರ ವಾರೆ..ವ್ಹಾ! ಚಿತ್ರದ ಚಿತ್ರೀಕರಣವು ಈಗ ನಗರದಲ್ಲಿ ಮುಂದುವರೆದಿದೆ. ಕಳೆದ ೧೬ ರಂದು ಬೆಳಗಾಂನ ಬೈಲಹೊಂಗಳದಲ್ಲಿ ಅಕ್ಷಯ ತೃತೀಯದಿನ ಚಿತ್ರೀಕರಣವು ಆರಂಭಗೊಂಡಿತು. ೬ ದಿವಸಗಳ ಕಾಲ ಬೈಲಹೊಂಗಲ, ಚಿಚಡಿ ಸುತ್ತಮುತ್ತ ಕೋಮಲ್‌ಕುಮಾರ್, ಭಾವನಾರಾವ್ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ವೀನಸ್ ಮೂರ್ತಿ ಛಾಯಾಗ್ರಹಣದಲ್ಲಿ ನಿರ್ದೇಶಕಿ ವಿಜಯಲಕ್ಷ್ಮಿ ಚಿತ್ರಿಸಿಕೊಂಡರು.

    ಚಿತ್ರದ ಚಿತ್ರೀಕರಣವು ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಿರ್ಮಾಪಕ ಜೈಜಗದೀಶ್ ತಿಳಿಸಿದ್ದಾರೆ.

ಚಿತ್ರಕ್ಕೆ ಶಂಕರ್ ಬಿಲ್ಲೆಮನೆ, ಮಗೇಶ್, ಸಂಭಾಷಣೆ, ವೀನಸ್ ಮೂರ್ತಿ ಛಾಯಾಗ್ರಹಣ, ವಿಶ್ವಜಿತ್ ಸಂಗೀತ, ಈಶ್ವರಿಕುಮಾರ್ ಕಲೆ, ಕೆಂಪರಾಜ್ ಸಂಕಲನ, ಮುರುಳಿ, ಹರ್ಷ ರಾಮು ನೃತ್ಯ, ವಿ.ಕೆ. ಮೂರ್ತಿ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆ, ರುದ್ರೇಶ್ ನಿರ್ದೇಶನ ಸಹಕಾರ ವಿದ್ದು ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಶ್ರೀಮತಿ ವಿಜಯಲಕ್ಷ್ಮಿಸಿಂಗ್,

ತಾರಾಗಣದಲ್ಲಿ ಕೋಮಲ್‌ಕುಮಾರ್ ಜೋಡಿಯಾಗಿ ಭಾವನಾರಾವ್ ಕಾಣಿಸಿಕೊಳ್ಳುತ್ತಿದ್ದು, ಸಂಭ್ರಮ, ಪಾರ್ವತಿ (ಮಾಡೆಲ್) ಕಿಶೋರಿ ಬಲ್ಲಾಳ್ ಪದ್ಮಜಾರಾವ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed